ರಾಕ್‌ಲೈನ್ ಸ್ಟುಡಿಯೋದಲ್ಲಿ `ಬುಲೆಟ್ ರಾಣಿ`
Posted date: 10 Wed, Dec 2014 – 11:26:48 AM

ಫ಼ೋಕಸ್ ಆನ್ ಪಿಕ್ಚರ್ಸ್ ಲಾಂಛನದಲ್ಲಿ ಸಲ್ಲಾವುದ್ದೀನ್ ಯುಸಫ಼ ಅವರು ನಿರ್ಮಿಸುತ್ತಿರುವ ‘ಬುಲೆಟ್ ರಾಣಿ ಚಿತ್ರಕ್ಕೆ ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈವರೆಗೂ ಎರಡು ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಇಕ್ಬಾಲ್ ಅವರು ನಿರ್ದೇಶಿಸುತ್ತಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಗುಣವಂತ್ ಸಂಗೀತ ನೀಡುತ್ತಿದ್ದಾರೆ. ಸೆಲ್ವಂ ಛಾಯಾಗ್ರಹಣ, ಸುರೇಶ್ ಸಂಕಲನ, ವೇಣುಪಾಲ್ ನೃತ್ಯ ನಿರ್ದೇಶನ, ಮಾಸ್‌ಮಾದ ಸಾಹಸ ನಿರ್ದೇಶನ ಹಾಗೂ ನಾಗು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನಾಗೇಶ್ವರರಾವ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಪ್ರಿಯಾಂಕ ಕೊತಾರಿ, ಆಶೀಷ್ ವಿದ್ಯಾರ್ಥಿ, ರವಿಕಾಳೆ, ಶಫ಼ಿ, ರಮೇಶ್(ತೆಲುಗು), ಪ್ರತಾಪ್, ರಾಜೇಶ್, ವಿವೇಕ್, ಉದಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed